Thursday, August 13, 2009

ಪತ್ರಿಕೆಗಳು ಬರುತ್ತವೇ ಸುಮ್ಮನಿರು..!

ಹೇಳಿ ಕೇಳಿ ಕಳೆದ ೧೪ ವರ್ಷಗಳಿಂದ ಪತ್ರಿಕೆಯಲ್ಲಿ ಉಸಿರಾಗಿ ದುಡಿದ ನನಗೆ(ಹಾಗೆ ಅಂದುಕೊಳ್ಳುತ್ತೇನೆ) ತಕ್ಷಣ ಕಾರಣಾತಂರದಿಂದ ಇದ್ದ ಪತ್ರಿಕೆಯೊಂದನ್ನು ಬಿಟ್ಟು ಮೂರು ತಿಂಗಳು ಮನೆಯಲ್ಲಿ ಕುಂತರೆ ಹೆಂಗಾಗಬೇಡ..!?
ಇದು ನನ್ನ ವಿಷಯವಲ್ಲ..ಬಹುತೇಕ ಪತ್ರಕರ್ತರ ಕುಟುಂಬಗಳು ಕೆಲಸವಿಲ್ಲದ ಆ ತಲ್ಲಣಗಳನ್ನು ಅನುಭವಿಸಿಯೇ ಇರುತ್ತಾರೆ. ಹಾಗಾಗಿ ಕೆಲಸದಲ್ಲಿದ್ದ ಪತ್ರಿಕೆಯೊಂದನ್ನು ಬಿಟ್ಟು ಬಂದ ತಕ್ಷಣ ಒಂದಿಬ್ಬರು ಆತ್ಮಿಯರು ಪತ್ರಿಕೆಯೊಂದನ್ನು ಮಾಡುವ ಬಗ್ಗೆಯು ಯೋಚಿಸಿದರೂ,ಅದು ಬೇಡ ಎಂದು ಹೇಳಿ ನಾನೇ ಸುಮ್ಮನಾಗಿ ಬಿಟ್ಟೆ.
ಸಾಮಾಜಿಕ ನ್ಯಾಯದ ಬಗ್ಗೆ ಪುಟಗಟ್ಟಲೇ ವರದಿ ಮಾಡುವ ನಮ್ಮ ಪತ್ರಕರ್ತರಿಗೆ ಅದೇಷ್ಟು ಜಾತಿ ಅಭಿಮಾನವಿದೆ ಎಂದು ನಿಮಗೆ ತಿಳಿದರೆ ವಾಕರಿಕೆಯಾಗದಿರದು. ನೈತಿಕತೆ, ಪ್ರಾಮಾಣಿಕತೆ ಹಾಗೂ ಜಾತಿ ಹೆಸರಿನಲ್ಲಿ ಅದೆಷ್ಟೋ ಪತ್ರಕರ್ತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿದ ಕೀರ್ತಿ ನಮ್ಮೂರಿನ ಕೆಲ ಪತ್ರಕರ್ತರಿಗೆ ಸಲ್ಲಬೇಕು. ಹಾಗಾಗಿ ಯಾರ ಬಳಿಯೂ ಕೆಲಸ ಕೇಳುವ ಅಥವಾ ಅದನ್ನು ದಕ್ಕಿಸಿಕೊಳ್ಳುವ ಹೊಸ ಪ್ರಯತ್ನಗಳಿಗೆ ನಾನು ಕೈ ಹಾಕಲೇ ಇಲ್ಲ. ಮೂರು ತಿಂಗಳ ತಲ್ಲಣಗಳನ್ನು ಈ ಹಿಂದೆ ಹಲವು ಬಾರಿ ಅನುಭವಿಸಿದ್ದರಿಂದ ಅದು ಹೊಸ ಅನುಭವ ಎನಿಸಲೇ ಇಲ್ಲ.
ಆದರೆ, ಕೆಲ ಸ್ನೇಹಿತರು ಮಾತ್ರ ದಿನಕ್ಕೊಂದು ಸಲಹೆ, ಸಾಂತ್ವನ ನೀಡುತ್ತಲೇ ಇದ್ದರು. ಕೆಲವರು ಆತ್ಮೀಯತೆಯಿಂದಲೇ ಬೇರೆ ಪತ್ರಿಕೆಗಳಿಗೆ ಸೇರಿಕೊಳ್ಳುವ ಅದಕ್ಕೆ ಬೆಂಬಲ ನೀಡುವ ಮಾತನಾಡಿದರು. ಆದರೆ, ಅದನ್ನು ಕೆಲವರು ಹಾಳುಗೆಡವಲು ನಿಲ್ಲುತ್ತಾರೆ ಎಂಬ ವಿಷಯ ಗೊತ್ತಾದ ತಕ್ಷಣ ನಾನು ಸುಮ್ಮನಾಗಿಬಿಟ್ಟೆ.
ಕಳೆದ ಒಂದು ವಾರದ ಹಿಂದೆ ಕನ್ನಡಪ್ರಭದ ಸಂಪಾದಕ ರಂಗನಾಥ ಅವರು ಪತ್ರಿಕೆ ಬಿಟ್ಟು ಸುವರ್ಣ ಟಿ.ವಿ ಸೇರಿರುವ ವಿಚಾರ ಹಾಗೆಯೇ ಅವರ ಸಮೂಹದಿಂದಲೇ ಸುವರ್ಣ ಕರ್ನಾಟಕ ಎಂಬ ಪತ್ರಿಕೆ ಬರುತ್ತದೆ ಎಂಬ ಸುದ್ದಿ ತಿಳಿದ ಸ್ನೇಹಿತರು ನನಗೆ ಮತ್ತಷ್ಟು ಸಲಹೆ ನೀಡಲು ಮುಂದಾದರು.
ಏಷಿಯನೆಟ್ ಸಮೂಹ, ವಿಜಯಸಂಕೇಶ್ವರ ಹಾಗೂ ರೆಡ್ಡಿ ಸಮೂಹದಿಂದ ಮೂರು ಪತ್ರಿಕೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ನೀನೇನು ಹೆದರಬೇಡ ಎಂದು. ನಿಜವಾಗಿಯು ಅದು ಸಂತೋಷದ ವಿಚಾರವೇ. ಆದರೆ, ಜಾತಿ ಮತ್ತು ಪ್ರಾಮಾಣಿಕರು ಎಂಬ ಸೋಗಿನ ಹೆಸರಿನಲ್ಲಿ ಮೂರು ಪತ್ರಿಕೆಗಳಲ್ಲಿ ಹೊಸ ಹೊಸ ಗುಂಪು ಹುಟ್ಟಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಯಾರು ಸಂಪಾದಕರಾಗುತ್ತಾರೋ ಅವರು ತಮ್ಮ ಜಾತಿಯ ಬಗ್ಗೆ ಒಲವು ಇಟ್ಟುಕೊಳ್ಳವುದಿಲ್ಲ ಎಂಬುದು ಸುಳ್ಳು ಮಾತು. ಬಹುಶಃ ಸುವರ್ಣ ಟಿ.ವಿಯಿಂದ ಹೊರಬಂದಿರುವ ಶಶಿಧರ ಭಟ್ಟರು ಹಿರಿಯ ಪತ್ರಕರ್ತರಾಗಿದ್ದರೂ ಇಂತಹ ತಪ್ಪನ್ನು ಮಾಡಿದ್ದಾರೆ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ಇವೆ. ತಮ್ಮವರಿಗೆ ಅವರು ಮೊದಲ ಆದ್ಯತೆ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಈಗ ಪ್ರಾರಂಭವಾಗಲಿರುವ ಪತ್ರಿಕೆಗಳಿಗೆ ಯಾರು ಸಂಪಾದಕರಾಗುತ್ತಾರೆ ಎಂಬುದೇ ಕುತೂಹಲದ ವಿಷಯ. ಸಂಪಾದಕರು ನಿರ್ಧಾರವಾದ ನಂತರವಷ್ಟೇ ಅಲ್ಲಿನ ಸಿಬ್ಬಂದಿಯ ಆಯ್ಕೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಬಿಡಬಹುದು. ಅದನ್ನು ಆಡಳಿತ ಮಂಡಳಿ ನಿರ್ವಹಿಸದೆ ಸಂಪಾದಕರ ತೀರ್ಮಾನಕ್ಕೆ ಬಿಡುವ ಸಾಧ್ಯತೆ ಹೆಚ್ಚಿರುವುದರಿಂದ ಜಾತಿವಾರು ಪತ್ರಕರ್ತರ ಹುಡುಕಾಟ ನಡದೇ ತೀರುತ್ತದೆ.
ಹಾಗಾಗಿ ಜಿಲ್ಲಾವಾರು ಆಯ್ಕೆಯಲ್ಲೂ ಜಾತಿ ಪ್ರಮುಖ ಪಾತ್ರ ವಹಿಸುವುದರಿಂದ ಅದರ ಬಗ್ಗೆ ಒಲವು ಇಟ್ಟುಕೊಳ್ಳುವುದು ಬೇಡ ಎನಿಸಿತು. ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪತ್ರಿಕೆಗಳ ಆಗಮನ ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಆಶಿಸೋಣ.
ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ದಲಿತನೊಬ್ಬ ರಾಜ್ಯ ಮಟ್ಟದ ದಿನಪತ್ರಿಕೆಯೊಂದಕ್ಕೆ ಸಂಪಾದಕನಾಗುವ ಆರ್ಹತೆ ಇನ್ನು ಪಡೆದುಕೊಂಡಿಲ್ಲ ಎನ್ನುವುದು ನೋವು ತರುತ್ತದೆ. ಹಾಗೆ ಲೆಕ್ಕ ಹಾಕಿ ನೋಡಿದರೆ, ಈಗ ಇರುವ ಎಲ್ಲ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಒಂದೇ ಜಾತಿಗೆ ಸೇರಿದವರು. ಈ ನಾಡಿನ ಬಹುಸಂಖ್ಯಾತರಾಗಿರುವ ದಲಿತರಲ್ಲಿ ಒಬ್ಬ ಪತ್ರಕರ್ತ ಸಂಪಾದಕನಾಗುವ ಅರ್ಹತೆ ಪಡೆದಿಲ್ಲವೇ?. ಇದಕ್ಕೆ ಮತ್ತೆ ಪತ್ರಿಕೋದ್ಯಮದ ಜಾತಿ ಲೆಕ್ಕಚಾರ ಅಡ್ಡಗಾಲಾಗುತ್ತದೆ. ಅವರ ಪ್ರಾಮಾಣಿಕತೆಯ ಹೆಸರಿನಲ್ಲಿ ಜಾತಿ ಸೋಗು ಹಾಕಿಕೊಂಡ ಕುಂಟು ನೆಪಗಳು ಪತ್ರಿಕೆಗಳ ಆಡಳಿತ ಮಂಡಳಿಗಳನ್ನು ಕಿವಿಕಚ್ಚುತ್ತವೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವು ಕರ್ನಾಟಕದಲ್ಲಿ ಅಂತಹದೊಂದು ಪ್ರಯತ್ನ ನಡೆದಿಲ್ಲ ಎನ್ನುವುದು ವಿಚಿತ್ರವೆನಿಸುತ್ತದೆ.
ಹ್ಹಾ ಮರೆತಿದ್ದೇ...ಒಂದಿಷ್ಟು ಸ್ನೇಹಿತರು ಸೇರಿಕೊಂಡು ೫ಪಿಎಂ ಎಂಬ ಸಂಜೆ ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ. ತೀರಾ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಸುದ್ದಿ ವೈವಿದ್ಯತೆಯಲ್ಲಿ ಒಬ್ಬ ಓದುಗನನ್ನು ಸೆಳೆಯಬಹುದು ಎಂಬ ಸಂಗತಿ ನಮಗೆ ಅರಿವಾಗಿದೆ. ಅದಕ್ಕಾಗಿ ತಯಾರಿ ಆರಂಭವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ೨೫ ಕ್ಕೆ ಪತ್ರಿಕೆ ಮೊದಲ ಸಂಚಿಕೆ ನಿಮ್ಮ ಕೈಯಲ್ಲಿರುತ್ತದೆ.

9 comments:

ಪ್ರವೀ said...

ಮೊದಮೊದಲು ನೀವು ಬರೆದದ್ದನ್ನು ಓದುತ್ತಾ ಅಬ್ಬಾ ಇಂತಹ ಪ್ರಾಮಾಣಿಕ, ಜಾತ್ಯತೀತ ಪತ್ರಕರ್ತರು ನಮ್ಮಲ್ಲಿದ್ದಾರಲ್ಲ ಎಂದು ಖುಷಿಯಾಯಿತು. ಆದರೆ ಕೊನೆ ಕೊನೆಗೆ ನೋಡಿದರೆ ಬೇರೆಯವರದ್ದು ಜಾತಿಬುದ್ದಿ ಎಂದು ಹೇಳುತ್ತಾ ನಿಮ್ಮ ಜಾತಿ ಅಭಿಮಾನ ತೋರಿಸಿಬಿಟ್ಟಿರಿ. ಅಲ್ಲಾ ಸರ್, ಬೇರೆಯವರು ಹಾಗೆ ಮಾಡ್ತಾರೆ ಅಂತ ಬೈಯುತ್ತಾ ನೀವು ಅದೇ ರೀತಿ ಇಂತಹ ಜಾತಿಯವನೇ ಸಂಪಾದಕ ಆಗಬೇಕು ಅಂತ ಹೇಳ್ತೀದ್ದೀರಲ್ಲ! ಯಾವುದೇ ಸ್ಥಾನಕ್ಕೆ ಜಾತಿ ಅನ್ನುವುದು ಮಾನದಂಡ ಯಾಕಾಗಬೇಕು? ದಲಿತ ಎಂಬ ಒಂದೇ ಕಾರಣಕ್ಕೆ ಸಂಪಾದಕನನ್ನಾಗಿ ಮಾಡಬೇಕಾ? ಯಾರಲ್ಲಿ ಪ್ರತಿಭೆ, ಕೆಪಾಸಿಟಿ ಇದೆಯೋ ಅವರು ಆಗುತ್ತಾರೆ. ಯಾರನ್ನೂ ಆತ ಇಂತಹ ಜಾತಿಯವನು ಎಂದು ಕರೆದು ಸಂಪಾದಕನ ಸ್ಥಾನ ಕೊಡುವುದಿಲ್ಲ. ಹಾಗೇನಾದರೂ ಕೊಟ್ಟಿದ್ದರೆ ಪತ್ರೀಕೋದ್ಯಮದಲ್ಲಿ ನೀವು ಮಾಡುತ್ತಿರುವ ಹಾಗೆ ಜಾತಿನೋಡಿ ಮನುಷ್ಯರನ್ನು ಅಳೆಯುವವರೇ ಕಾರಣ ಅಷ್ಟೆ. ಸುಮ್ಮನೇ ಅವರ ಜಾತಿ ಮಾತ್ರ ನೋಡಿ ಕರುಬುವುದು ಹೊಟ್ಟೆಕಿಚ್ಚೆನಿಸಿಕೊಳ್ಳುತ್ತದ ಮತ್ತು ಅಸಮರ್ಥತೆಯನ್ನು ತೋರಿಸುತ್ತದೆ. ನಿಮ್ಮ ಹೊಸ ಪತ್ರಿಕೆಗೆ ಆಲ್ ದ ಬೆಸ್ಟ್.! ಇದಕ್ಕೆ ನೀವು ಬಯಸಿದ ಜಾತಿಯವನನ್ನೇ ಸಂಪಾದಕನನ್ನಾಗಿ ಮಾಡಿ ಮತ್ತು ಅದನ್ನು ರಾಜ್ಯಮಟ್ಟಕ್ಕೆ ಬೆಳೆಸಿ.

ದಿನೇಶ್ ಕುಮಾರ್ ಎಸ್.ಸಿ. said...

ಶುಭಾಶಯಗಳು

ಗೋವಿಂದ್ರಾಜ್ said...

Sir,ಸರ್, ಈ ಸಮಾಜದಲ್ಲಿ ಅಸಮಾನತೆ ಅಜನ್ಮಸಿದ್ಧ ಹಕ್ಕು ಎಂಬಂತೆ ಪ್ರತಿಪಾದಿಸುವ ವರ್ಗವೇ ನಮ್ಮ ಕಣ್ಣ ಮುಂದಿರುವುದು ಸತ್ಯ. ಆದರೆ, ಅದನ್ನು ಎದೆ ಒಡ್ಡಿ ನಿಂತು ನಿಂತು ಮುಂದೆ ನಡೆವ ಧೈರ್ಯ ಛಾತಿ ಕೆಲವರಿಗೆ ಮಾತ್ರ. ನೀವು ಪತ್ರಿಕೆ ಮಾಡುವ ಧೈರ್ಯ ಮಾಡಿದ್ದೂ ಖುಷಿ. ಆದರೆ, ಅದನ್ನು ಲಾಭದಾಯಕ ರೀತಿಯಲ್ಲಿ ನಡೆಸುವ ಮಾರ್ಗವು ನಿಮ್ಮದಾಗಲಿ. ಮತ್ತು ಅದು ಸಾಮಾಜಿಕ ಕಳಕಳಿ ಯನ್ನು ಬಿಂಬಿಸಲಿ. ಸರ್, ಎ ಭೂಮಿ ಇರೋವರೆಗೂ ಎಲ್ಲ ಅಸಮಾನತೆ ಇರಲೇಬೇಕು ಎಂಬಂತೆ ಇರುವುದು ನಮ್ಮ ಕಣ್ಣ ಮುಂದಿನ ಸತ್ಯ. ಅದನ್ನು ಮೆಟ್ಟಿ. ಹೆಸರು ಬೇಡ, ಮೈಸೂರು.

Sahana said...

ದಲಿತ ಎಂಬ ಒಂದೇ ಕಾರಣಕ್ಕೆ ಸಂಪಾದಕನನ್ನಾಗಿ ಮಾಡಬೇಕಾ?
Not for that one reason.and, it is waste to explain to you why ?

you just name most of the editors in Kannada. who are they ? why ?

we nees just one from other cast, any cast. OK

Anonymous said...

ಸರ್ಕಾರಿ ಪತ್ರಿಕೆಗಳಿದ್ದರೆ ದಲಿತರೂ ಸಂಪಾದಕರಾಗುತ್ತಿದ್ದರೋ ಏನೋ. ಅದೃಷ್ಟವಶಾತ್ ಅಲ್ಲಿ ಮೀಸಲಾತಿ ಇಲ್ಲ. ಅಲ್ಲಪ್ಪಾ, ಇಷ್ಟು ವರ್ಷ ಮೀಸಲಾತಿ ಕೊಟ್ಟು ನಿಮ್ಮನ್ನು ಸಾಕಿದ್ದೂ ಆಯ್ತು ಎಜುಕೇಷನ್ ಕೊಟ್ಟಿದ್ದೂ ಆಯ್ತು. ಈಗಲಾದರೂ ನಿಮ್ಮ ಯೋಗ್ಯತೆಯ ಮೇಲೆ ಸಂಪಾದಕರಾಗಿ ನೋಡೋಣ. ನಿಮ್ಮಲ್ಲೇ ಶ್ರೀಮಂತರಿದ್ದಾರಲ್ಲ. ಅವರಿಗೇ ಒಂದು ಪತ್ರಿಕೆ ಮಾಡೋಕೆ ಹೇಳಿ ಸಂಪಾದಕರಾಗಿ ಪತ್ರಿಕೆ ನಡೆಸಿ ನೋಡೋಣ. ಎಲ್ಲೋ ಭ್ರಾಂತು ಕಣ್ರಯ್ಯ ನಿಮಗೆಲ್ಲ. ನಾಲ್ಕಕ್ಷರ ಬ್ರಾಹ್ಮಣರನ್ನು ಬೈಕೊಂಡು ಓಡಾಡದೇ ಇದ್ರೆ ನಿಮಗೆ ತಿಂದಿದ್ದು ಜೀರ್ಣ ಆಗೋಲ್ಲ ಅಂತ ಕಾಣತ್ತೆ. ಇದಕ್ಕೆ ಉತ್ತರಿಸೋ ಅಗತ್ಯ ಇರಲಿಲ್ಲ. ಆದ್ರೆ ನಿಮ್ಮ ಭ್ರಮೆ ನೋಡಿ ನಗು ಬಂದು ಬರೆದೆ.
-Shama

Anonymous said...

ನಾಲ್ಕಕ್ಷರ ಬ್ರಾಹ್ಮಣರನ್ನು ಬೈಕೊಂಡು ಓಡಾಡದೇ ಇದ್ರೆ ನಿಮಗೆ ತಿಂದಿದ್ದು ಜೀರ್ಣ
here anybody scold Bomman..NO. why you(Shama)thought like that..?

Its in your mind. Ok.
ಇಷ್ಟು ವರ್ಷ ಮೀಸಲಾತಿ ಕೊಟ್ಟು ನಿಮ್ಮನ್ನು ಸಾಕಿದ್ದೂ ಆಯ್ತು ಎಜುಕೇಷನ್ ಕೊಟ್ಟಿದ್ದೂ ಆಯ್ತು. ಈಗಲಾದರೂ ನಿಮ್ಮ ಯೋಗ್ಯತೆಯ..
But, you people oppressed them for about thousand years..ok..mind it..

ukolegere said...

ithink u r renukradya
am right
sorry i can understand ur felling.
ples reply my id ukolgere@gmail.com

Anonymous said...

who the hel r u Shama
ಮೀಸಲಾತಿಯನ್ನು ನಿನ್ನ ಮನೆಯಿಂದ ತಂದು ಕೊಟ್ಟಷ್ಟು ಸಂಕಟ ಪಟ್ಟಿದೆಯಲ್ಲಾ Shama.
ಅನಾದಿ ಕಾಲದಿಂದ ನೀನು ಹೇಳುವ ಬ್ರಾಹ್ಮಣರು, ಬದುಕಲ್ಲಿಕ್ಕಾಗಿ ಹೇಸಿಗೆ ಹೊತ್ತು ಇಂದು ಸಂಪಾದಕರಾಗಿದ್ದರೆ, ಮೆಚ್ಚಬುದ್ದಿತ್ತು.

sandeepa said...

ನಿಮ್ಮ ನೋವು ನನಗರ್ಥವಾಯಿತು.....